
9th April 2025
ಕುಷ್ಟಗಿ: ತಾಲೂಕಾಡಳಿತ ಹಾಗೂ ಜೈನ ಸಮಾಜದ ನೇತೃತ್ವದಲ್ಲಿ ಏಪ್ರೀಲ್ ತಿಂಗಳ 10 ರಂದು ಭಗವಾನ ಮಹಾವೀರ ಜಯಂತಿ ಆಚರಣೆಯನ್ನು ತಾಲೂಕಿನ ನಿಲೋಗಲ್ ಗ್ರಾಮದಲ್ಲಿ ಆಚರಿಸಲು ತಹಶೀಲ್ದಾರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ನಿರ್ಣಯಿಸಲಾಯಿತು.
ಸೋಮವಾರ ತಹಶೀಲ್ದಾರ ಅಶೋಕ ಶಿಗ್ಗಾಂವಿ ಅಧ್ಯಕ್ಷತೆಯಲ್ಲಿ ನಡೆದ ಭಗವಾನ್ ಮಹಾವೀರ ಜಯಂತಿ ಹಿನ್ನೆಲೆಯ ಪೂರ್ವಭಾವಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು. ತಾಲೂಕಿನ ನಿಲೋಗಲ್ ಗ್ರಾಮದಲ್ಲಿ ನವೀಕರಣಗೊಂಡ ಜೈನ ಬಸದಿ ಉದ್ಘಾಟನೆ ಹಾಗೂ ತಾಲೂಕಿನಲ್ಲಿ ನಿಲೋಗಲ್ ಗ್ರಾಮದಲ್ಲಿ ಅಧಿಕ ಸಂಖ್ಯೆಯಲ್ಲಿ ಜೈನ ಸಮುದಾಯ ವಾಸವಿದೆ. ತಾಲೂಕಾಡಳಿತ ಆಚರಿಸಲಾಗುವ ಜಯಂತಿಯನ್ನು ಅದೇ ಗ್ರಾಮದಲ್ಲಿ ಆಚರಿಸಲು ಜೈನ ಸಮುದಾಯದ ಅಧ್ಯಕ್ಷ ಶಾಂತರಾಜ್ ಗೋಗಿ ಮನವಿ ಮಾಡಿದರು.
ತಹಶೀಲ್ದಾರ ಅಶೋಕ ಶಿಗ್ಗಾಂವಿ ಮಾತನಾಡಿ, ಭಗವಾನ್ ಮಹಾವೀರ ಜಯಂತಿ ಕಾರ್ಯಕ್ರಮದ ದಿನ ಸರಕಾರಿ ರಜೆ ಇದ್ದು, ಆ ದಿನ ಕಚೇರಿಯಲ್ಲಿ ಸಾಂಕೇತಿಕವಾಗಿ ಆಚರಿಸಲಾಗುವುದು. ಏಪ್ರೀಲ್ 11ರಂದು ಜೈನ ಸಮುದಾಯ, ವಿವಿಧ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ತಹಶೀಲ್ದಾರ ಕಛೇರಿಯ ಸಭಾಂಗಣದಲ್ಲಿ ಆಚರಿಸುವ ಬಗ್ಗೆ ಪ್ರಸ್ತಾಪಿಸಿದರು.
ನಿಲೋಗಲ್ ಗ್ರಾಮದಲ್ಲಿ ಆಚರಿಸಿದರೆ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತಿಯ ಬಗ್ಗೆ ಅನುಮಾನ ವ್ಯಕ್ತ ಪಡಿಸಿದ ಅವರು, ನಾನು ಮಾತ್ರ ಆ ದಿನ ಖಂಡಿತವಾಗಿ ಭಾಗವಹಿಸುವೆ. ಸದರಿ ನಿಲೋಗಲ್ ಗ್ರಾಮದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಹಾಜರಾಗಲು ನೋಟೀಸ್ ಜಾರಿ ಮಾಡುವುದಾಗಿ ತಿಳಿಸಿದರು. ಮಹಾವೀರ ಜಯಂತಿಗೆ ಸರ್ಕಾರ ರಜೆ ನೀಡಿರುವುದು ಸರಕಾರಿ ಅಧಿಕಾರಿಗಳಿಗೆ ನೆಪ ಆಗಬಾರದು, ನಿಲೋಗಲ್ ಗ್ರಾಮ ತಾಲೂಕಾ ಕೆಂದ್ರದಿಂದ ದೂರ ಇದೆ ಎಂದು ಹಿಂಜರಿಯದೇ ಸದರಿ ಕಾರ್ಯಕ್ರಮಕ್ಕೆ ಹಾಜರಾಗಲು ಮನವಿ ಮಾಡಿದರು.
ಜೈನ ಸಮುದಾಯದ ಶಾಂತರಾಜ್ ಗೋಗಿ ಜೈನ್, ಅಮರಚಂದ್ ಜೈನ್, ವೀರೇಶ ಬಂಗಾರಶೆಟ್ಟರ್ ಸೇರಿದಂತೆ ಸಮಾಜ ಕಲ್ಯಾಣ ಇಲಾಖೆಯ ಸುಂದರ್, ಪುರಸಭೆ ನೈರ್ಮಲ್ಯ ಅಧಿಕಾರಿ ಪ್ರಾಣೇಶ ಬಳ್ಳಾರಿ, ಕಂದಾಯ ಇಲಾಖೆಯ ಸುಂದರೇಶಕುಮಾರ್ ಹಾಗೂ ತಾಲೂಕ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.
ಕುಷ್ಟಗಿ ತಾಲೂಕಾಡಳಿತ ಹಾಗೂ ಜೈನ ಸಮಾಜದ ನೇತೃತ್ವದಲ್ಲಿ ಏಪ್ರೀಲ್ ತಿಂಗಳ 10 ರಂದು ಭಗವಾನ ಮಹಾವೀರ ಜಯಂತಿ ಆಚರಣೆಯನ್ನು ತಾಲೂಕಿನ ನಿಲೋಗಲ್ ಗ್ರಾಮದಲ್ಲಿ ಆಚರಿಸಲು ತಹಶೀಲ್ದಾರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ನಿರ್ಣಯಿಸಲಾಯಿತು.
ಕುಷ್ಟಗಿಯ ಶ್ರೀ ರಾಮ ದೇವರ ದೇವಸ್ಥಾನದಲ್ಲಿ ಜರುಗಿದ ಶ್ರೀ ರಾಮನವಮಿ ಉತ್ಸವ ಶ್ರದ್ಧಾಭಕ್ತಿಯಿಂದ ಜರುಗಿದ ಶ್ರೀ ರಾಮನವಮಿ ಉತ್ಸವ: ಭಕ್ತರಿಗೆ ಕೋಸಂಬರಿ, ಪಾನಕ ವಿತರಣೆ
ಗಡಿ ತಾಲೂಕು ಆಳಂದನಲ್ಲಿ ಡಿ.ಸಿ. ಸಂಚಾರ: ಕುಡಿಯುವ ನೀರಿನ ಸಮಸ್ಯೆ ಕುರಿತು ಸಾರ್ವಜನಿಕರ ಸಮಸ್ಯೆ ಆಲಿಕೆ
ಡಾ,ಬಿ,ಆರ್,ಅಂಬೇಡ್ಕರ ಪ್ರತಿಮೆಗೆ ಸ್ಥಳವಕಾಶಕ್ಕೆ ಸ್ಪಂಧಿಸಿದ ಸಚಿವ ಡಾ,ಮಾಹಾದೇವಪ್ಪವರಿಗೆ ಗೌರವ ಸನ್ಮಾನ!!